ನಮ್ಮ ಬಗ್ಗೆ
- ಹೋಂ
- ನಮ್ಮ ಬಗ್ಗೆ
ನಮ್ಮ ಬಗ್ಗೆ
ಸಮಾನ ಸಮಾಜ, ಸಹಬಾಳ್ವೆಯ ಬದುಕು

ಸಮಗ್ರಾಭಿವೃದ್ದಿ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಇದರ ಉದ್ದೇಶ ಧ್ಯೇಯ ಸಮಾಜಕ್ಕೆ ಸಮಾನವಾಗಿ, ಕಾರ್ಯವನ್ನು
ನಿಭಾಯಿಸುವುದು. ನಮ್ಮ ಮೂಲ ಉದ್ದೇಶ ಗ್ರಾಮೀಣ ಭಾಗದ ಕಾಡು ನಿವಾಸಿಗಳ ಆರ್ಥಿಕ ಪರಿಸ್ಥಿತಿ ಸಬಲೀಕರಣ ಹಾಗೂ,
ಶಾಲೆಯಿಂದ ವಂಚಿತರಾದ ಮಕ್ಕಳಿಗೆ ಮೂಲಭೂತ ಸೌಕರ್ಯ, ವಿದ್ಯಾಭ್ಯಾಸಕ್ಕೆ ಆರ್ಥಿಕನೆರವು, ಗ್ರಾಮೀಣ ಪ್ರದೇಶಗಳಲ್ಲಿ ವಾಸವಿರುವ
ಮಹಿಳೆಯರಿಗೆ, ಕೌಶಲ್ಯಾಧಾರಿತ ತರಬೇತಿ, ಕಾರ್ಯಕ್ರಮ ಮಾಡುವುದರ ಜೊತೆ ಸ್ವಾಭಿಮಾನಿ ಮಹಿಳೆಯರಿಗೆ ಸ್ವಾವಲಂಬನೆಯ ಬದುಕು
ಸಾಗಿಸುವ ಸಾಮರ್ಥ್ಯವನ್ನು ಕಲ್ಪಿಸುತ್ತದೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಇವತ್ತಿನ ತಾಂತ್ರಿಕತೆಯ ಉನ್ನತ, ಕೌಶಲ್ಯಾಧಾರಿತ ತರಬೇತಿ
ಕೊಟ್ಟು ಸ್ವಂತ ಉದ್ಯೋಗ ಸೃಷ್ಟಿಸುವ ಶಕ್ತಿ ತುಂಬುವುದು, ಆಪತ್ಕಾಲದಲ್ಲಿ ಹಾಗೂ ಪ್ರಕೃತಿಯ ವಿಕೋಪಕ್ಕೆ ಸಿಲುಕಿದ ಗ್ರಾಮಗಳಿಗೆ
ನಮ್ಮ ಸಂಸ್ಥೆ ಸಮಗ್ರಾಭಿವೃದ್ದಿ ಈಗಾಗಲೇ ತನ್ನ ಮಾನವೀಯ ಮೌಲ್ಯಗಳ ಕಾರ್ಯ ಮಾಡಿದೆ.
ಅದರಲ್ಲಿ ಕೊಡಗು ಜಿಲ್ಲೆಯ ಭೂಕುಸಿತ, ಬೆಳೆಹಾನಿ, ಮನೆಹಾನಿ ಆದಂತಹ ಪ್ರದೇಶಗಳಲ್ಲಿ ನಮ್ಮ ಸಂಸ್ಥೆ ಅವರ ಸಹಾಯಕ್ಕೆ ನಿಂತು
ಸುಮಾರು 300
ಕುಟುಂಬಗಳಿಗೆ ಅಗತ್ಯ ವಸ್ತುಗಳು, ಆಹಾರ ಪೂರೈಕೆ, ಔಷಧಿ, ಮಕ್ಕಳಿಗೆ ಪೌಷ್ಟಿಕಾಹಾರ, ಉಡುಪುಗಳನ್ನು
ಕೊಡುವುದರ ಜೊತೆ ಅವರ ನೋವಿಗೆ ಸ್ಪಂದಿಸಿದೆ. ಅದರ ಮರು ವರ್ಷದಲ್ಲಿ ಆದಂತಹ ಮತ್ತೊಂದು ಅನಾಹುತ ಧಾರಾಕಾರವಾಗಿ ಮಳೆ
ಸುರಿದ ಪರಿಣಾಮ, ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದ ಸುತ್ತಮುತ್ತ ಹಳ್ಳಿಗಳ ನೆರವಿಗೆ ನಿಂತು ಅಲ್ಲಿಯೂ ಸುಮಾರು 500
ಕುಟುಂಬಗಳಿಗೆ 2 ತಿಂಗಳಿಗೆ ಆಗುವಷ್ಟು ದಿನಸಿ ಕಿಟ್, ಬಟ್ಟೆಗಳು, ಅಗತ್ಯ ವಸ್ತುಗಳು ಹಾಗೂ ಔಷಧೋಪಚಾರ ನೀಡುವುದರ ಮೂಲಕ
ಸಹಾಯದ ಹಸ್ತ ನೀಡಿದೆ.ಪ್ರಕೃತಿ ನಮಗೆ ಎಲ್ಲವನ್ನೂ ಕೊಟ್ಟಿದೆ; ಆ ಪ್ರಕೃತಿಗೆ ನಾವು ಕೊಡಬೇಕಾದ ಜವಾಬ್ದಾರಿ ನಮ್ಮ ಮೇಲೂ ಇದೆ. ಈ ನಿಟ್ಟಿನಲ್ಲಿ ನಮ್ಮ
ಸಂಸ್ಥೆ ಕಳೆದ ಬಾರಿ 10 ಸಾವಿರ ಮರ ಬೆಳೆಸುವ ಸಲುವಾಗಿ 10 ಸಾವಿರ ವಿವಿಧ ಗಿಡಮರಗಳ ಬೀಜಗಳನ್ನು ಗೊಬ್ಬರದ ಜೊತೆ ಬೆರೆಸಿ
ಬಂಡೀಪುರ ಅರಣ್ಯಗಳಲ್ಲಿ ಬೀಜಗಳ ಬಿತ್ತನೆ, ಜೊತೆಗೆ ಎಲ್ಲಾ ಹಳ್ಳಿಗಳಲ್ಲಿ ಮೆಡಿಕಲ್ ಕ್ಯಾಂಪ್, ರಕ್ತನಿಧಿ ಸಂಗ್ರಹ, ಇತ್ಯಾದಿ ಇವೆಲ್ಲಾ
ನಮ್ಮ ಸಮಗ್ರಾಭಿವೃದ್ದಿಯ ನಿಸ್ವಾರ್ಥ ಉದ್ದೇಶ.
ಕೋವಿಡ್ ಸಂದರ್ಭದಲ್ಲಿ ನಮ್ಮ ಸಂಸ್ಥೆಯಿಂದ ಸುಮಾರು 3000 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ಹಾಗೂ ಜಾಗೃತಿ ಅಭಿಯಾನ,
ಮೆಡಿಕಲ್ ಕಿಟ್ ವಿತರಣೆ, ಕೆಲವರಿಗೆ ಬೆಡ್ ವ್ಯವಸ್ಥೆ
ಮಾಡಲಾಯಿತು.

ನಮ್ಮ ಬಗ್ಗೆ
ಸಮಾನ ಸಮಾಜ, ಸಹಬಾಳ್ವೆಯ ಬದುಕು
ಸಮಗ್ರಾಭಿವೃದ್ದಿ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಇದರ ಉದ್ದೇಶ ಧ್ಯೇಯ ಸಮಾಜಕ್ಕೆ ಸಮಾನವಾಗಿ, ಕಾರ್ಯವನ್ನು
ನಿಭಾಯಿಸುವುದು. ನಮ್ಮ ಮೂಲ ಉದ್ದೇಶ ಗ್ರಾಮೀಣ ಭಾಗದ ಕಾಡು ನಿವಾಸಿಗಳ ಆರ್ಥಿಕ ಪರಿಸ್ಥಿತಿ ಸಬಲೀಕರಣ ಹಾಗೂ,
ಶಾಲೆಯಿಂದ ವಂಚಿತರಾದ ಮಕ್ಕಳಿಗೆ ಮೂಲಭೂತ ಸೌಕರ್ಯ, ವಿದ್ಯಾಭ್ಯಾಸಕ್ಕೆ ಆರ್ಥಿಕನೆರವು, ಗ್ರಾಮೀಣ ಪ್ರದೇಶಗಳಲ್ಲಿ ವಾಸವಿರುವ
ಮಹಿಳೆಯರಿಗೆ, ಕೌಶಲ್ಯಾಧಾರಿತ ತರಬೇತಿ, ಕಾರ್ಯಕ್ರಮ ಮಾಡುವುದರ ಜೊತೆ ಸ್ವಾಭಿಮಾನಿ ಮಹಿಳೆಯರಿಗೆ ಸ್ವಾವಲಂಬನೆಯ ಬದುಕು
ಸಾಗಿಸುವ ಸಾಮರ್ಥ್ಯವನ್ನು ಕಲ್ಪಿಸುತ್ತದೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಇವತ್ತಿನ ತಾಂತ್ರಿಕತೆಯ ಉನ್ನತ, ಕೌಶಲ್ಯಾಧಾರಿತ ತರಬೇತಿ
ಕೊಟ್ಟು ಸ್ವಂತ ಉದ್ಯೋಗ ಸೃಷ್ಟಿಸುವ ಶಕ್ತಿ ತುಂಬುವುದು, ಆಪತ್ಕಾಲದಲ್ಲಿ ಹಾಗೂ ಪ್ರಕೃತಿಯ ವಿಕೋಪಕ್ಕೆ ಸಿಲುಕಿದ ಗ್ರಾಮಗಳಿಗೆ
ನಮ್ಮ ಸಂಸ್ಥೆ ಸಮಗ್ರಾಭಿವೃದ್ದಿ ಈಗಾಗಲೇ ತನ್ನ ಮಾನವೀಯ ಮೌಲ್ಯಗಳ ಕಾರ್ಯ ಮಾಡಿದೆ.
ಅದರಲ್ಲಿ ಕೊಡಗು ಜಿಲ್ಲೆಯ ಭೂಕುಸಿತ, ಬೆಳೆಹಾನಿ, ಮನೆಹಾನಿ ಆದಂತಹ ಪ್ರದೇಶಗಳಲ್ಲಿ ನಮ್ಮ ಸಂಸ್ಥೆ ಅವರ ಸಹಾಯಕ್ಕೆ ನಿಂತು
ಸುಮಾರು 300 ಕುಟುಂಬಗಳಿಗೆ ಅಗತ್ಯ ವಸ್ತುಗಳು, ಆಹಾರ ಪೂರೈಕೆ, ಔಷಧಿ, ಮಕ್ಕಳಿಗೆ ಪೌಷ್ಟಿಕಾಹಾರ, ಉಡುಪುಗಳನ್ನು
ಕೊಡುವುದರ ಜೊತೆ ಅವರ ನೋವಿಗೆ ಸ್ಪಂದಿಸಿದೆ. ಅದರ ಮರು ವರ್ಷದಲ್ಲಿ ಆದಂತಹ ಮತ್ತೊಂದು ಅನಾಹುತ ಧಾರಾಕಾರವಾಗಿ ಮಳೆ
ಸುರಿದ ಪರಿಣಾಮ, ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದ ಸುತ್ತಮುತ್ತ ಹಳ್ಳಿಗಳ ನೆರವಿಗೆ ನಿಂತು ಅಲ್ಲಿಯೂ ಸುಮಾರು 500
ಕುಟುಂಬಗಳಿಗೆ 2 ತಿಂಗಳಿಗೆ ಆಗುವಷ್ಟು ದಿನಸಿ ಕಿಟ್, ಬಟ್ಟೆಗಳು, ಅಗತ್ಯ ವಸ್ತುಗಳು ಹಾಗೂ ಔಷಧೋಪಚಾರ ನೀಡುವುದರ ಮೂಲಕ
ಸಹಾಯದ ಹಸ್ತ ನೀಡಿದೆ.
ಪ್ರಕೃತಿ ನಮಗೆ ಎಲ್ಲವನ್ನೂ ಕೊಟ್ಟಿದೆ; ಆ ಪ್ರಕೃತಿಗೆ ನಾವು ಕೊಡಬೇಕಾದ ಜವಾಬ್ದಾರಿ ನಮ್ಮ ಮೇಲೂ ಇದೆ. ಈ ನಿಟ್ಟಿನಲ್ಲಿ ನಮ್ಮ