ಹೋಂ
- ಹೋಂ
- ಚಟುವಟಿಕೆಗಳು
ಚಟುವಟಿಕೆಗಳು
ಕಳೆದು ಐದು ವರ್ಷಗಳಲ್ಲಿ ದಕ್ಷಿಣ ಭಾರತದ ಹಲವೆಡೆ ಸಂಭವಿಸಿದ ಪ್ರಕೃತಿ ವಿಕೋಪಗಳು ಮತ್ತು ಸಮಗ್ರಾಭಿವೃದ್ದಿಯ ಪರಿಹಾರ ಕಾರ್ಯಗಳು

"ಉದ್ಯೋಗ ಹುಡುಕಬೇಡಿ; ಉದ್ಯೋಗ ಸೃಷ್ಟಿಸಿ"
ಬೆಂಗಳೂರಿನ “ಸಮಗ್ರಾಭಿವೃದ್ಧಿ ಟ್ರಸ್ಟ್ “ಹಾಗೂ ಕಾರಟಗಿರಿಯ “ಸಿ.ಮಲ್ಲಿಕಾರ್ಜುನ ನಾಗಪ್ಪ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ”
ಆಶ್ರಯದಲ್ಲಿ “ಉದ್ಯೋಗ ಹುಡುಕಬೇಡಿ, ಉದ್ಯೋಗ ಸೃಷ್ಟಿಸಿ” ಯೋಜನೆಯಡಿಯಲ್ಲಿ ಸಿಎಮ್‌ಎನ್ ಕಾಲೇಜ್ ಸಭಾಂಗಣದಲ್ಲಿ ವೆಬ್ ಡಿಸೈನಿಂಗ್ ಮತ್ತು ಡೆವಲೆಪ್ಮೆಂಟ್, ಡಿಜಿಟಲ್ ಮಾರ್ಕೆಟಿಂಗ್ (SEO & SMM), ಒರಾಕಲ್ ಡಿಬಿಎ, ಮಾನವ ಸಂಪನ್ಮೂಲ ಮತ್ತು ವ್ಯವಸ್ಥೆ ಕುರಿತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದು ದಿನದ ಉಚಿತ ತಾಂತ್ರಿಕ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ತಾಂತ್ರಿಕ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಸಸಿಗಳನ್ನು ಹಾಗೂ “ಸಮಗ್ರ ಮಾಹಿತಿ-ಅರ್ಥಪೂರ್ಣ ಆಂಗ್ಲ” ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು.

ಸಮಗ್ರಾಭಿವೃದ್ಧಿ ಟ್ರಸ್ಟ್ ೪ನೇ ವರ್ಷದ ವಾರ್ಷಿಕೋತ್ಸವ
ಸಮಗ್ರಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷೆಯಾದ ಡಾ. ಸ್ನೇಹಾ ರಾಕೇಶ್ ತಮ್ಮ ಟ್ರಸ್ಟ್ ಗೆ 14 ಅಕ್ಟೋಬರ್ 2022 ರಂದು ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ ಡಾ. ಸ್ನೇಹಾ ರಾಕೇಶ್ ರವರು ತಮ್ಮ ಹುಟ್ಟೂರಾದ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಗೂರಮಾರನಹಳ್ಳಿಯಲ್ಲಿರುವ ತಾವು ಕಲಿತ ʼಮೊರಾರ್ಜಿ ದೇಸಾಯಿ ವಸತಿ ಶಾಲೆʼ ಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ “ಸಮಗ್ರ ಮಾಹಿತಿ-ಅರ್ಥಪೂರ್ಣ ಆಂಗ್ಲ” ಎನ್ನುವ ಪುಸ್ತಕವನ್ನು ಉಚಿತವಾಗಿ ವಿತರಿಸಿದರು.

"ಉದ್ಯೋಗ ಹುಡುಕಬೇಡಿ; ಉದ್ಯೋಗ ಸೃಷ್ಟಿಸಿ"
“ಉದ್ಯೋಗ ಹುಡುಕಬೇಡಿ, ಉದ್ಯೋಗ ಸೃಷ್ಟಿಸಿ” ಒಂದು ದಿನದ ಉಚಿತ ತಾಂತ್ರಿಕ ತರಬೇತಿ ಕಾರ್ಯಾಗಾರದಲ್ಲಿ ಸಂಸ್ಥೆಯ ಮುಖ್ಯಸ್ಥೆ
ಸ್ನೇಹಾ ರಾಕೇಶ್ ಅವರು ಕಾರ್ಯಾಗಾರದಲ್ಲಿ ಅಭ್ಯರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು.

ಬಂಡೀಪುರ
ಸಮಗ್ರಾಭಿವೃದ್ದಿ ಟ್ರಸ್ಟ್ ನ್ನು ನಾಗರಿಕ ಸಮಾಜದಲ್ಲಿ ಪ್ರಕೃತಿಯ ಮಡಿಲಲ್ಲಿ ಇರುವ ನಾವು ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ
ಸಲುವಾಗಿ ನಮ್ಮ ತಂಡ ಹುಣಸೂರು ಭಾಗದಲ್ಲಿ ಹಲವಾರು ಜನರ ಬೆಂಬಲದೊಂದಿಗೆ ಸರಿ ಸುಮಾರು 10 ಸಾವಿರ ಮರಗಳ
ವೃದ್ಧಿಗಾಗಿ ವಿವಿಧ ಜಾತಿಯ ಮರಗಳ ಬೀಜಗಳನ್ನು ಬಂಡೀಪುರದ ಅರಣ್ಯ ಪ್ರದೇಶದಲ್ಲಿ ನೆಡುವ ಸಲುವಾಗಿ 10 ಸಾವಿರ
ಬೀಜಗಳನ್ನು ಮಣ್ಣು ಹಾಗೂ ಗೊಬ್ಬರದ ಜೊತೆ ಮಿಶ್ರಣ ಮಾಡಿ ನೆಡಲಾಯಿತು.

ಕೊಡುಗಿನ ಪ್ರಕೃತಿಯ ವಿಕೋಪ
2018 ರಲ್ಲಿ ಭೀಕರ ಮಳೆಯಿಂದಾಗಿ ಉಂಟಾದ ಭೂಕುಸಿದ ಪರಿಣಾಮ ಹಲವಾರು ಮನೆಗಳು ನಾಶವಾಗಿ ಎಷ್ಟೋ ಜನರ ಬದುಕು
ಅತಂತ್ರವಾಗಿ ನೊಂದಾಗ ಅವರಿಗೆ ಭರವಸೆ ನೀಡುವ ಸಲುವಾಗಿ ಸಮಗ್ರಾಭಿವೃದ್ದಿಯ ಮುಖ್ಯಸ್ಥರಾದ ಶ್ರೀಮತಿ ಸ್ನೇಹ ರಾಕೇಶ್ ಅವರ
ನೇತೃತ್ವದಲ್ಲಿ
ನೊಂದ ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಕಿಟ್, ಅಗತ್ಯ ವಸ್ತುಗಳು, ಮಕ್ಕಳಿಗೆ ಮತ್ತು ದೊಡ್ಡವರಿಗೆ ಬಟ್ಟೆಗಳು,
ಪಾತ್ರೆಗಳು ಮತ್ತು ಔಷಧಿಗಳನ್ನುವಿತರಿಸಲಾಗಿದೆ. ಅಷ್ಟೇ ಅಲ್ಲದೆ ಇದರೊಂದಿಗೆ ಸಂತ್ರಸ್ತರಿಗೆ ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು
ಸ್ಥಾಪಿಸುವುದರ ಮೂಲಕ ಸ್ವತಃ ಸಮಗ್ರಾಭಿವೃದ್ದಿ ತಂಡವು ಜನರ ಸೇವೆಗೆ ಮುಂದಾಗಿ ಅವರಿಗೆ ಸಹಾಯದ ಜೊತೆ ಭರವಸೆಯ ಬೆಳಕು
ಚೆಲ್ಲುವ ಮೂಲಕ ನಮ್ಮ ಹೆಮ್ಮೆಯ ಸಂಸ್ಥೆ ಸಂತ್ರಸ್ತರಿಗೆ ಆತ್ಮಸ್ತೈರ್ಯ ತುಂಬುವ ಕೆಲಸ ಮಾಡಿದೆ.

ಉತ್ತರ ಕರ್ನಾಟಕ
ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದಲ್ಲಿ ಅತಿಹೆಚ್ಚು ಮಳೆಯಿಂದಾಗಿ ಅತಿ ಸಂಕೀರ್ಣದಿಂದ ಪ್ರವಾಹದ ಸುಳಿಯಲ್ಲಿ ಸುಮಾರು 400
ಕುಟುಂಬಗಳು ಮನೆ ಕೃಷಿಗೆ ಭೂಮಿ ಎಲ್ಲವನ್ನೂ ಕಳೆದುಕೊಂಡ ಗ್ರಾಮಗಳು ಬೀರ್ನೂರು, ಜಕ್ಕನೂರು, ಆಲಗೂರ, ಚಳ್ಳಕೆರೆ, ಪ್ರವಾಹ
ಪೀಡಿತ ಪ್ರದೇಶಗಳಲ್ಲಿ ನಮ್ಮ ಸಮಗ್ರಾಭಿವೃದ್ದಿ ಆ 400 ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸದ ಜೊತೆಗೆ ಆ ಕುಟುಂಬಗಳಿಗೆ
ಸುಮಾರು 3 ತಿಂಗಳಿಗಾಗುವ ದಿನಸಿ ಪದಾರ್ಥಗಳು, ಹೊಸ ಬಟ್ಟೆಗಳು, ಮಕ್ಕಳಿಗೆ ಪೌಷ್ಟಿಕಾಹಾರ, ವಿದ್ಯಾರ್ಥಿಗಳಿಗೆ ಪುಸ್ತಕ
ಸಾಮಗ್ರಿಗಳು, ಎಲ್ಲರಿಗೂ ಹೊಸ ಚಪ್ಪಲಿಗಳು, ಕೆಲವು ಕಾಯಿಲೆಯ ರೋಗಿಗಳ ಉಚಿತ ಚಿಕಿತ್ಸೆ, ಕೊಡಿಸುವ ಮೂಲಕ ನಮ್ಮ
ಕಾರ್ಯಾಚರಣೆ ಫಲದಾಯಕವಾಗಿ ಯಶಸ್ವಿಯಾಗಿ ನಿರ್ವಹಿಸಿತು.

ರಕ್ತದಾನ ಶಿಬಿರ
ಸಮಗ್ರಾಭಿವೃದ್ದಿಯ ಮಾನವೀಯ ಮೌಲ್ಯಗಳ ಕೆಲಸ.
ʼನಮ್ಮ ರಕ್ತದಾನ ಮತ್ತೊಬ್ಬರಿಗೆ ಜೀವದಾನʼ ಈ ಉದ್ದೇಶದಿಂದ,
ನಮ್ಮ ಸಂಸ್ಥೆಯ ತಂಡ ಸ್ವಯಂ ಸೇವಕ ವೃಂದವನ್ನೊಳಗೊಂಡು ಕರ್ನಾಟಕದಾದ್ಯಂತ ನಿಯಮಿತವಾಗಿ ರಕ್ತದಾನ ಶಿಬಿರಗಳನ್ನು
ನಡೆಸುತ್ತಾ ಬಂದಿದೆ. ಸಂಗ್ರಹಿಸಿದ ವಿವಿಧ ಗುಂಪಿನ ರಕ್ತವನ್ನು ವೈದ್ಯರ ಮೂಲಕ ರಕ್ತನಿಧಿಗಳಿಗೆ ತಲುಪಿಸುವ ಕಾರ್ಯದಲ್ಲಿ
ಯಶಸ್ವಿಯಾಗಿದೆ.

ಬಂಡೀಪುರ
ಸಮಗ್ರಾಭಿವೃದ್ದಿ ಟ್ರಸ್ಟ್ ನ್ನು ನಾಗರಿಕ ಸಮಾಜದಲ್ಲಿ ಪ್ರಕೃತಿಯ ಮಡಿಲಲ್ಲಿ ಇರುವ ನಾವು ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವಸಲುವಾಗಿ ನಮ್ಮ ತಂಡ ಹುಣಸೂರು ಭಾಗದಲ್ಲಿ ಹಲವಾರು ಜನರ ಬೆಂಬಲದೊಂದಿಗೆ ಸರಿ ಸುಮಾರು 10 ಸಾವಿರ ಮರಗಳ ವೃದ್ಧಿಗಾಗಿ ವಿವಿಧ ಜಾತಿಯ ಮರಗಳ ಬೀಜಗಳನ್ನು ಬಂಡೀಪುರದ ಅರಣ್ಯ ಪ್ರದೇಶದಲ್ಲಿ ನೆಡುವ ಸಲುವಾಗಿ 10 ಸಾವಿರ ಬೀಜಗಳನ್ನು ಮಣ್ಣು ಹಾಗೂ ಗೊಬ್ಬರದ ಜೊತೆ ಮಿಶ್ರಣ ಮಾಡಿ ನೆಡಲಾಯಿತು.

ಸಿಂಧನೂರು
ಸಿಂಧನೂರಿನಲ್ಲಿ ಸಮಗ್ರಾಭಿವೃದ್ದಿ ಟ್ರಸ್ಟ್ “ಉದ್ಯೋಗ ಹುಡುಕಬೇಡಿ –ಉದ್ಯೋಗ ಸೃಷ್ಟಿಸಿ” ಕಾರ್ಯಾಗಾರದ ಮೂಲಕ ಇವತ್ತಿನ
ಉದ್ಯೋಗ ವಂಚಿತ ಯುವಪೀಳಿಗೆಗೆ ನಮ್ಮ ಸಂಸ್ಥೆ ಬದುಕಿನ ಭರವಸೆ ನೀಡುವ ಸಲುವಾಗಿ ಯುವ ಜನತೆಗೆ ಸ್ವಾವಲಂಬನೆ ಮತ್ತು
ಉದ್ಯಮಶೀಲತೆಯ ಅರಿವು ಮೂಡಿಸುವ ಸಲುವಾಗಿ ಪೀಠಿಕಾ ಕಾರ್ಯಕ್ರಮದ ಜೊತೆಗೆ ಕೌಶಲ್ಯ ಅಭಿವೃದ್ದಿ ಕೋರ್ಸ್‌ಗಳಿಗೆ ಚಾಲನೆ
ನೀಡಿದೆ.