ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಯುರೋಪ್‌ ಸಂಸದ

ಲಾರ್ಡ್‌ ವೇವರ್ಲೇ ಭೇಟಿ

ಸೋಮವಾರ ದಿ.26-09-2022 ರಂದು ಯುರೋಪ್‌ ಸಂಸತ್ತಿನ ಸಂಸದರಾದ ಲಾರ್ಡ್‌ ವೇವರ್ಲೇ ಅವರು ನಮ್ಮ ಸಮಗ್ರಾಭಿವೃದ್ಧಿ ಟ್ರಸ್ಟ್‌ ನ ಕಚೇರಿಗೆ ಆಗಮಿಸಿದ್ದು ನಮಗೆಲ್ಲ ಹೆಮ್ಮೆಯ ವಿಷಯ. ನಮ್ಮ ಸಮಗ್ರಾಭಿವೃದ್ಧಿ ಟ್ರಸ್ಟ್‌ ಮಾಡಿದ ಜನಸೇವೆಗಳು, ನಡೆಸಲಾದ ಉಚಿತ ಉದ್ಯೋಗ ತರಬೇತಿ ಶಿಬಿರಗಳು, ಉಚಿತ ರಕ್ತದಾನ ಶಿಬಿರ, ಸಸಿ ನೆಡುವ ಕಾರ್ಯಕ್ರಮ, ನೈಸರ್ಗಿಕ ವಿಪತ್ತಿನಂತಹ ಪ್ರವಾಹ ಅತಿವೃಷ್ಟಿ-ಅನಾವೃಷ್ಟಿ ಸಮಯದಲ್ಲಿ ನೀಡಿದ ನೆರವಿನ ಹಸ್ತ ಹಾಗೂ ಕೋವಿಡ್-‌19 ರ ಸಂದರ್ಭದಲ್ಲಿ ಬಡವರಿಗೆ ಮತ್ತು ರೋಗಿಗಳಿಗೆ ಕಿಟ್‌ ವಿತರಣೆ ಮಾಡಿರುವ ಕುರಿತು ತಿಳಿದು ಸಂತಸ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ನಮ್ಮ ಸಮಗ್ರಾಭಿವೃದ್ಧಿ ಟ್ರಸ್ಟ್‌ ನ ಮುಖ್ಯಸ್ಥೆಯಾದ ಡಾ.ಸ್ನೇಹಾ ರಾಕೇಶ್‌ ದಂಪತಿ ಲಾರ್ಡ್‌ ವೇವರ್ಲೇ ಅವರನ್ನು ಸನ್ಮಾನಿಸಿದರು. ಯುರೋಪ್-ಇಂಡಿಯಾ ಸೆಂಟರ್‌ ಫಾರ್‌ ಬ್ಯುಸಿನೆಸ್‌ ಅಂಡ್‌ ಇಂಡಸ್ಟ್ರಿ ಮುಖ್ಯಸ್ಥರಾದ ಶ್ರೀ ಸುಜಿತ್‌ ಎಸ್.‌ ನಾಯರ್‌ ಉಪಸ್ಥಿತರಿದ್ದರು. 

ಸಂಸದ ತೇಜಸ್ವಿಸೂರ್ಯ ಭೇಟಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು ಶ್ರೀ ತೇಜಸ್ವಿ ಸೂರ್ಯ, ಬಸವನಗುಡಿ ಕ್ಷೇತ್ರದ ಶಾಸಕರಾದ ಶ್ರೀ ರವಿ ಸುಬ್ರಮಣ್ಯ ಹಾಗೂ ಅವರ ಸಹೋದರ‌ ಶ್ರೀ ಚಂದ್ರಶೇಖರ್ ಮತ್ತು ವಿದ್ಯಾಪೀಠ ಕತ್ರಿಗುಪ್ಪೆ ವಾರ್ಡ್‌ ನ ಬಿಬಿಎಂಪಿ ಸದಸ್ಯರಾದ ಶ್ರೀ ಸಂಗಾತಿ ವೆಂಕಟೇಶ್‌ ರವರು ನಮ್ಮ ಸಮಗ್ರಾಭಿವೃದ್ಧಿ ಟ್ರಸ್ಟ್‌ ಕಚೇರಿಗೆ ಭೇಟಿ ನೀಡಿ ಟ್ರಸ್ಟ್ ನ ಮುಖ್ಯಸ್ಥೆ ಡಾ.ಸ್ನೇಹಾ ರಾಕೇಶ್‌ ರೊಂದಿಗೆ ಮಾತನಾಡಿದ ಅವರು ಸಮಗ್ರಾಭಿವೃದ್ಧಿ ಟ್ರಸ್ಟ್‌ ನ ಸಾಮಾಜಿಕ ಸೇವೆಗಳು ಹಾಗೂ ಚಟುವಟಿಕೆಗಳ ಕುರಿತು ಚರ್ಚಿಸಿದರು.